ನೀಟ್‌ ಸಾಧಕರಿಗೆ ಸನ್ಮಾನ

ಎಕ್ಸೆಲ್ ಕಾಲೇಜು ಗುರುವಾಯನಕೆರೆ ನೀಟ್ ಟಾಪರ್ ಮೌರ್ಯ ವೈ.ಡಿ.ಗೆ ಅದ್ಧೂರಿ ಸನ್ಮಾನ ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್-2026’, ರಾಜ್ಯ ಮಟ್ಟದ ‘ಕೆ-ಸಿಇಟಿ’ (KCET) ಹಾಗೂ ‘ಜೆಇಇ ಮೇನ್ಸ್’ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪ್ರತಿಮ ಸಾಧನೆಗೈದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಸ್ಥೆಗೆ ಕೀರ್ತಿ ತಂದಿರುವ ಹೆಮ್ಮೆಯ ವಿದ್ಯಾರ್ಥಿ ಮೌರ್ಯ ವೈ.ಡಿ. ಅವರನ್ನು ⁠ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ವತಿಯಿಂದ ಅತ್ಯಂತ ಅಭಿಮಾನ ಪೂರ್ವಕವಾಗಿ ಸನ್ಮಾನಿಸಲಾಯಿತು.